ಬೀರ್‍ಬೂಮ್, ಮ್ಯಾಕ್ಸ್	
1872-1956. ಇಂಗ್ಲಿಷ್ ಪ್ರಬಂಧಕಾರ, ವಿರ್ಮಶಕ, ವ್ಯಂಗ್ಯಚಿತ್ರಕಾರ, ಹುಟ್ಟಿದ್ದು ಲಂಡನ್ನಿನಲ್ಲಿ. ನಟ ಹರ್ಬರ್ಟ್ ಬೀರ್‍ಬೋಮ್ ಈತನ ಮಲ ಸಹೋದರ. ವಿದ್ಯಾಭ್ಯಾಸ ಆಕ್ಸ್‍ಫರ್ಡ್‍ನಲ್ಲಿ. ಬರ್ನಾರ್ಡ್ ಷಾನ ಅನಂತರ ದಿ ಸಾಟರ್ ಡೇ ರಿವ್ಯೂದ ನಾಟಕ ವಿಮರ್ಶಕನಾದ (1898). ಈತನ ಮೊದಲ ಪ್ರಕಟಣೆ ದಿ ವಕ್ಸ್ - ಆಫ್ ಮ್ಯಾಕ್ಸ್ ಬೀರ್ ಬೂಮ್ (ಬೀರ್‍ಬೂಮ್‍ನ ಕೃತಿಗಳು-1896). ಮೋರ್ ಯಟ್ ಎಗೇನ್; ಅಂಡ್ ಈವನ್ ನವ್; ಎ ವೆರೈಟಿ ಆಫ್ ತಿಂಗ್ಸ್; ಎ ಕ್ರಿಸ್‍ಮಸ್ ಗಾರ್‍ಲ್ಯಾಂಡ್-ಇವು ಈತನ ಇತರ ಕೃತಿಗಳು. ಅಲ್ಲದೆ ವ್ಯಂಗ್ಯ ಚಿತ್ರಗಳ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾನೆ. 1939ರಲ್ಲಿ ಈತನಿಗೆ ನೈಟ್ ಪದವಿ ನೀಡಿ ಗೌರವಿಸಲಾಯಿತು.

	ಸರಳವೂ ಮೋಹಕವೂ ಆದ ಗದ್ಯ ಈತನದ್ದು. ಸಮಾಜದಲ್ಲಿಯ ಆಷಾಡಭೂತಿತ್ವವನ್ನು ಪರಿಣಾಮಕಾರಿಯಾಗಿಯೂ ಅಗತ್ಯವಾದಾಗ ಸೂಕ್ಷ್ಮವಾಗಿಯೂ ವಿಡಂಬನೆ ಮಾಡುವ ಬುದ್ಧಿ ಚಾತುರ್ಯವುಳ್ಳವ. 			  
(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ